Pattabhisheka Part 1 | ಪಟ್ಟಾಭಿಷೇಕ ಭಾಗ 1 | Yakshagana Talamaddale | ಯಕ್ಷಗಾನ ತಾಳಮದ್ದಳೆ | ಯಕ್ಷಲಹರಿ
Yaksha Lahari Yaksha Lahari
116 subscribers
5,730 views
93

 Published On Premiered Dec 3, 2023

ಕಳೆದ ಮೂರ್ನಾಲ್ಕು ದಶಕಗಳ ಹಿಂದೆ ಯಕ್ಷಗಾನ-ತಾಳಮದ್ದಳೆಗಷ್ಟೇ ಸೀಮಿತವಲ್ಲದೆ ಇತರೆ ಅನೇಕ ಸಾಂಸ್ಕೃತಿಕ ಹಾಗು ಸಾಮಾಜಿಕ ಕೆಲಸಕ್ಕೆ ಸದಾ ವೇದಿಕೆಯಂತಿದ್ದ ಊರು ಯಲ್ಲಾಪುರದ ಬಳಗಾರ ಎಂದರೆ ಅತಿಶಯೋಕ್ತಿಯಲ್ಲ.
ಇಂದು ಮತ್ತದೇ ಉತ್ಸುಕತೆಲ್ಲಿ, ಅದೇ ಹಳೆತನದ ಜೀವಂತಿಕೆಯಲ್ಲಿ, ನವಿರಾದ ಲಹರಿಯಂತೆ ನವೀನವಾಗಿ, ಊರಿನ ಗ್ರಾಮದೇವರು ಶ್ರೀ ಲಕ್ಷ್ಮೀನೃಸಿಂಹ ಹಿರೀಮಠ, ಕೋರೆಮಠ ಮಹಾಗಣಪತಿ ದೇವರುಗಳ ಹಾಗು ಸಮಸ್ತ ಊರನಾಗರಿಕರ ಶುಭಾಶೀರ್ವಾದದಲ್ಲಿ , ಹಳೆಯ ಕಲೆಯ ಬೇರೊಂದಕ್ಕೆ ಹೊಸಚಿಗುರಂತೆ ಹುಟ್ಟಿಕೊಂಡ ವೇದಿಕೆಯೇ ಶ್ರೀ ಲಕ್ಷ್ಮೀನೃಸಿಂಹ ಯಕ್ಷವೇದಿಕೆ ಬಳಗಾರ.

ಇಂತಿರುವ ಸಮಾನಮನಸ್ಕರ ಸಂಘಟನೆಯ ತೊದಲುನುಡಿಯಂತೆ, ಮೊದಲ ಕಾರ್ಯಮವಾಗಿ ಜರುಗಿದ ಬಳಗಾರ ಯಕ್ಷಲಹರಿ-1 ಇದರ ವೀಡಿಯೋ ಸರಣಿಯನ್ನ ನಿಮ್ಮ ಮುಂದಿಡುತ್ತಿದ್ದೇವೆ.

ನಿಮ್ಮ ಶುಭಹಾರೈಕೆಯೇ ನಮ್ಮೆಲ್ಲ ಸಂಕಲ್ಪಕ್ಕೆ ಸಂದುವ ಶಕ್ತಿ.

ಹಿಮ್ಮೇಳ:
ಭಾಗವತರು : ಶ್ರೀ ರವೀಂದ್ರ ಭಟ್ಟ ಅಚವೆ ಮತ್ತು ಶ್ರೀ ಅನಂತ ಹೆಗಡೆ ದಂತಳಿಗೆ
ಮದ್ದಳೆ : ಶ್ರೀ ಶಂಕರ ಭಾಗ್ವತ್ ಮತ್ತು ಶ್ರೀ ಕವಾಳೆ ಗಣಪತಿ ಭಾಗ್ವತ್


ಮುಮ್ಮೇಳ:
ಶ್ರೀ ವಿದ್ವಾನ್‌ ಗಣಪತಿ ಭಟ್, ಸಂಕದಗುಂಡಿ
ಶ್ರೀ ವಿಶ್ವೇಶ್ವರ ಭಟ್, ಸುಣ್ಣಂಬಳ
ಶ್ರೀ ಗಣೇಶ ಶೆಟ್ಟಿ, ಕನ್ನಡಿಕಟ್ಟೆ
ಡಾ.|| ಶ್ರೀ ದತ್ತಾತ್ರೇಯ ಗಾಂವ್ಕರ್
ಶ್ರೀ ವಿದ್ವಾನ್‌ ಮಹೇಶ ಭಟ್, ಇಡಗುಂದಿ

show more

Share/Embed