ವಾರಕ್ಕೊಂದು ಕನ್ನಡ ಹಾಡು ಸಂಚಿಕೆ 30
Kannada Koota of Northern California Kannada Koota of Northern California
287 subscribers
986 views
10

 Published On Jul 31, 2024

ವಾರಕ್ಕೊಂದು ಕನ್ನಡ ಹಾಡು - 30 ನೇ ಸಂಚಿಕೆ
ಕೆ ಕೆ ಎನ್ ಸಿ

ಎಲ್ಲರಿಗೂ ನಮಸ್ಕಾರ,
ಜುಲೈ ತಿಂಗಳ ವಿಷಯ :
ಗುರುವಂದನೆ ಮತ್ತು ಜಗನ್ನಾಥಸ್ತುತಿ

ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ (ಹೆಚ್ಚೆಸ್ವಿ) ಯವರು ರಚಿಸಿರುವ 'ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ' ಭಾರತೀಯ ಸಂಸ್ಕೃತಿಯ ಸಾರವನ್ನು ಬಿಂಬಿಸಿದೆ. ಜೀವನದಲ್ಲಿ ಸಾರ್ಥಕ ಮಾರ್ಗ ತೋರಿಸುವಂತೆ ಗುರು ಕೃಪೆ ಇರಲಿ ಎಂಬ ಪ್ರಾರ್ಥನೆ ಇದೆ ಈ ಸುಪ್ರಸಿದ್ದ ಕವನದಲ್ಲಿ.

ಜನಪ್ರಿಯ ಕವಿ ಹೆಚ್ಚೆಸ್ವಿಯವರಿಗೆ ಈ ತಿಂಗಳು 80 ತುಂಬಿತು. ಕನ್ನಡ ಕೂಟ ಅವರಿಗೆ ಈ ವೇದಿಕೆ ಮೂಲಕ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದೆ.

ನಮ್ಮ ಬೇ ಏರಿಯಾದ ಗಾಯಕಿ ಶ್ರೀಮತಿ ಶೋಭಲತಾ ಪಟ್ಟಣಶೆಟ್ಟಿ ಈ ಹಾಡನ್ನು ಬಹಳ ಮಧುರವಾಗಿ ಹಾಡಿದ್ದಾರೆ.

ನೀವು ಹಾಡುತ್ತೀರಾದರೆ, ನೀವು ಹಾಡಿರುವ video ಒಂದನ್ನು ನಿಮ್ಮ Google driveಗೆ upload ಮಾಡಿ, ಈ ಫಾರಂ ತುಂಬಿರಿ. https://forms.gle/TGkEXE1pQfLRpkBbA

ವಿ. ಸೂ.: ಅಂತಿಮ ಆಯ್ಕೆ ನಮ್ಮ ತಂಡಕ್ಕೆ ಬಿಟ್ಟದ್ದು. ಎಂದಿನಂತೆ ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು.

ಇಗೋ ಇಲ್ಲಿದೆ ಈ ವಾರದ ಹಾಡು -

ಇರಬೇಕು ಇರುವಂತೆ
ಸಾಹಿತ್ಯ: ಡಾ. ಎಚ್.ಎಸ್. ವೆಂಕಟೇಶಮೂರ್ತಿ
ಸಂಗೀತ - ರಾಘವೇಂದ್ರ ಬೀಜದಿ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ ||ಪ||

ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು || 1 ||

ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು || 2 ||

ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು || 3 ||

ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ
ಹಾಲುತೆನೆಯಲಿ ಅಮೃತ ತುಂಬಿ ನದಿಯು
ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು || 4 ||

show more

Share/Embed