ವಾರಕ್ಕೊಂದು ಕನ್ನಡ ಹಾಡು - 25ನೇ ಸಂಚಿಕೆ
Kannada Koota of Northern California Kannada Koota of Northern California
287 subscribers
486 views
6

 Published On Jun 27, 2024

ವಾರಕ್ಕೊಂದು ಕನ್ನಡ ಹಾಡು - 25ನೇ ಸಂಚಿಕೆ
ಕೆ ಕೆ ಎನ್ ಸಿ

ಎಲ್ಲರಿಗೂ ನಮಸ್ಕಾರ,
ಜೂನ್ ತಿಂಗಳ ವಿಷಯ : “ಎದೆ ತುಂಬಿ ಹಾಡುವೆನು"
ವಿಶ್ವ ಸಂಗೀತ ದಿನಾಚರಣೆ - ನಿಮ್ಮ ನೆಚ್ಚಿನ ಕನ್ನಡ ಹಾಡು

ಜೂನ್ ೨೧ ವಿಶ್ವ ಸಂಗೀತ ದಿನಾಚರಣೆ. “ವಾರಕ್ಕೊಂದು ಕನ್ನಡ ಹಾಡು” ವೇದಿಕೆ ಮೂಲಕ ನಾವು ದಾಸರ ಪದ, ಶರಣರ ವಚನ, ಭಾವಗೀತೆ, ಚಲನಚಿತ್ರ ಗೀತೆ, ಶಾಸ್ತ್ರೀಯ ಸಂಗೀತ, ಜಾನಪದ - ಎಲ್ಲ ಪ್ರಕಾರದ ಕನ್ನಡ ಹಾಡುಗಳನ್ನು
ನಿಮಗಾಗಿ ಪ್ರಸಾರ ಮಾಡುತ್ತಿದ್ದೇವೆ. ಸ್ಥಳೀಯ ಗಾಯಕರಿಗೆ ಪ್ರೋತ್ಸಾಹ, ಸಂಗೀತದ ಮಾಧ್ಯಮದ ಮೂಲಕ ಕನ್ನಡದ ಸೇವೆ - ಇವೇ ನಮ್ಮ ಉದ್ದೇಶ.

ವಿಶ್ವ ಸಂಗೀತ ದಿನಾಚರಣೆಯ ಈ ಶುಭಸಂದರ್ಭದಲ್ಲಿ ಈ ಕಾರ್ಯಕ್ರಮದ 25 ನೇ ಹಾಡನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಒಂದು ಜನಪ್ರಿಯ ಹಾಡನ್ನು ನಮ್ಮ ಬೇ ಏರಿಯಾ ಗಾಯಕರಾದ ಶ್ರೀ ರಘು ಹಾಲೂರು ಹಾಡಿದ್ದಾರೆ. ಕೇಳಿ ಆನಂದಿಸಿ.

ನೀವು ಹಾಡುತ್ತೀರಾದರೆ, ನೀವು ಹಾಡಿರುವ video ಒಂದನ್ನು ನಿಮ್ಮ Google driveಗೆ upload ಮಾಡಿ, ಈ ಫಾರಂ ತುಂಬಿರಿ. https://forms.gle/TGkEXE1pQfLRpkBbA
ವಿ. ಸೂ.: ಅಂತಿಮ ಆಯ್ಕೆ ನಮ್ಮ ತಂಡಕ್ಕೆ ಬಿಟ್ಟದ್ದು. ಎಂದಿನಂತೆ ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು.

ಇಗೋ ಇಲ್ಲಿದೆ ಈ ವಾರದ ಹಾಡು -

ಓ ಚೆಲುವೆ ನಾಟ್ಯದ ಸಿರಿನವಿಲೇ
ಚಿತ್ರ: ರಾಗ ತಾಳ
ಹಿನ್ನೆಲೆ ಗಾಯನ: ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಶ್ರೀಮತಿ ಬೆಂಗಳೂರು ಲತಾ
ಸಂಗೀತ: ಶ್ರೀ ಎಂ ರಂಗರಾವ್ {ತೋಡಿ ರಾಗ ಆಧಾರಿತ ಚಿತ್ರಗೀತೆ.}

ಓ ಚೆಲುವೆ ನಾಟ್ಯದ ಸಿರಿನವಿಲೇ … ಹಂಸದ ನಡೆಯವಳೇ
ನಿನ್ನ ಮೋಹದ ಅಮಲಲ್ಲಿ ನಾ ಮೈಮರೆತಿರುವೆ ||

ನನ್ನ ಮನಸಿನ ಮಂದಿರದಿ ದೇವತೆ ನೀನಾದೆ
ನನ್ನ ಕನಸಿನ ಲೋಕದಲಿ ರಾಣಿ ನೀನಾದೆ
ನನ್ನ ಮಧುರ ಸ್ಮೃತಿಗಳ ಅಲೆಗಳಲಿ ತೇಲುವ ದೋಣಿಯು ನೀ
ಬಾ ತೀರಕೆ ಕಾಯುತಿದೆ ಈ ಹೃದಯವು ಮಿಡಿಯುತಿದೆ || 1 ||

ವಿಕಸಿತ ಕುಸುಮದಲೂ ನಿನ್ನ ಹುಸಿನಗೆ ಮೂಡುವುದು
ತೇಲುವ ಮುಗಿಲಿನಲೂ ನಿನ್ನ ರೂಪವೇ ಕಾಣುವುದು
ನನ್ನ ದೇಹದ ಪ್ರತಿ ಕಣ ಕಣದಲ್ಲೂ ನೀನೇ ತುಂಬಿರುವೆ
ಕಣ್ ತೆರೆದರೆ ಕಾಣಿಸುವೆ ಈ ಮನದಲಿ ಉಳಿದಿರುವೆ || 2 ||

ಸುಂದರಿಯೇ … ನನ್ನ ಆಶಾ ಮಂಜರಿಯೇ
ನನ್ನ ತನುವಿನ ಅಣುಅಣುವೇ …
ನಿನ್ನ ಪ್ರೇಮದ ಪಂಜರದಿ ಜಪಿಸುವ ಗಿಣಿಯಾದೆ
ನಾ ತಪಿಸುವ ಗಿಣಿಯಾದೆ || ಓ ಚೆಲುವೆ ||

#ವಾರಕ್ಕೊಂದುಕನ್ನಡಹಾಡು #KKNC2024 #KKNCಸಾಹಿತ್ಯಸಮಿತಿ #ಕನ್ನಡಕೂಟ
#KannadaMusic #KannadaSong #KannadaCulture #KannadaPride
#KannadaAssociationUSA #KannadaCommunity #KannadaMelody
#KannadaHits #KannadaArtists #KannadaInUSA

show more

Share/Embed