ನಗರಗಳಲ್ಲಿನ ಮಕ್ಕಳಿಗ್ಯಾಕೆ ಇಷ್ಟೊಂದು ಸಮಸ್ಯೆಗಳು! | ಅವಧೂತ ಶ್ರೀ ವಿನಯ್ ಗುರೂಜಿ
Avadhootha Avadhootha
274K subscribers
989 views
48

 Published On Sep 17, 2024

ನಗರಗಳಲ್ಲಿನ ಮಕ್ಕಳಿಗ್ಯಾಕೆ ಇಷ್ಟೊಂದು ಸಮಸ್ಯೆಗಳು! | ಅವಧೂತ ಶ್ರೀ ವಿನಯ್ ಗುರೂಜಿ

ಹಳ್ಳಿಯ ಮಕ್ಕಳಿಗೆ ಹೋಲಿಸಿದರೆ ನಗರಗಳಲ್ಲಿನ ಮಕ್ಕಳಲ್ಲಿ ಆರೋಗ್ಯ ಕಡಿಮೆ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಹಳ್ಳಿಗಳಲ್ಲಿನ ಮಕ್ಕಳು ಸಹಜ ಹಾಗೂ ನೈಸರ್ಗಿಕವಾದ ಜೀವನ ಶೈಲಿಗೆ ಹೊಂದಿಕೊಂಡಿರುತ್ತಾರೆ. ಆದರೆ ನಗರಗಳಲ್ಲಿನ ಮಕ್ಕಳು ಯಾಂತ್ರೀಕೃತ ಜೀವನ ಶೈಲಿಗೆ ಒಗ್ಗಿಕೊಂಡಿರುತ್ತಾರೆ. ಮಕ್ಕಳನ್ನು ಸಂಪತ್ತಿಗೋಸ್ಕರ ಬೆಳೆಸದೇ ಮಕ್ಕಳೇ ನಮ್ಮ ಸಂಪತ್ತು ಎಂಬ ನೆಲೆಯಲ್ಲಿ ಬೆಳೆಸಬೇಕು. ಮಕ್ಕಳ ಜೀವನವನ್ನು ಇತರ ಮಕ್ಕಳ ಅಥವಾ ಇತರ ಕುಟುಂಬಗಳ ಜೀವನ ಶೈಲಿಗೆ ಹೋಲಿಕೆ ಮಾಡಿ ಮುನ್ನಡೆಸಬಾರದು. ಹಾಗಾದಾಗ ಎಲ್ಲ ಸಮಸ್ಯೆಗಳೂ ಹುಟ್ಟುತ್ತವೆ. ಅಲ್ಲದೇ ಮಕ್ಕಳ ಜೀವನವೂ ಅಲ್ಲೋಲ ಕಲ್ಲೋಲವಾಗುತ್ತದೆ. ಹಳ್ಳಿಗಳಲ್ಲಿನ ಮಕ್ಕಳಿಗೆ ಅನುಭವದ ಜ್ಞಾನವಿದ್ದರೆ ನಗರಗಳಲ್ಲಿನ ಮಕ್ಕಳಿಗೆ ಪುಸ್ತಕದ ಜ್ಞಾನವಷ್ಟೇ ಇರುತ್ತದೆ. ಮಕ್ಕಳು ಪ್ರಬುದ್ಧರಾಗಿ ಬೆಳೆಯಬೇಕೆಂದರೆ ಅವರನ್ನು ಅವರ ಪಾಡಿಗೇ ಪ್ರಾಕೃತಿಕವಾಗಿ ಬೆಳೆಯಲು ಬಿಡಬೇಕು.

show more

Share/Embed