Lambodara Lakumikara | Purandaradasa | Pillari geete | ಲಂಬೋದರ ಲಕುಮಿಕರ | ಗೀತೆ 1
Music In Kannada Music In Kannada
12.9K subscribers
30,999 views
606

 Published On Oct 29, 2020

#ಗೀತೆಗಳು ಕರ್ನಾಟಕ ಸಂಗೀತದಲ್ಲಿ ಒಂದು ನಿರ್ಣಾಯಕ ಹಂತ. ಸ್ವಲ್ಪ ಶಾಸ್ತ್ರೀಯ ಜ್ಞಾನಕ್ಕಾಗಿ ಕಲಿಯುವ, ತಕ್ಕ ಮಟ್ಟಿಗೆ ಹಾಡುವ ಸಂಗೀತಾಸಕ್ತರು
ಗೀತೆಗಳವರೆಗೆ ಕಲಿಯಲೇಬೇಕು. ಇಲ್ಲಿ ಸಾಹಿತ್ಯವನ್ನು ಸ್ವರಗಳೊಂದಿಗೆ ಜೋಡಿಸಿ ಹಾಡುವುದನ್ನುಕಲಿಯಬಹುದು.
ಬೇರೆ ಬೇರೆ ರಾಗಗಳೊಂದಿಗೆ ಇನ್ನೂ ಉತ್ತಮವಾಗಿ ಹಾಡಲು ಕಲಿಯಬೇಕೆನ್ನುವವರು ವರ್ಣಗಳು ಪಾಠದವರೆಗೆ ಕಲಿಯಬಹುದು.
ಹೆಚ್ಚಿನ ರಾಗಗಳನ್ನು, ಕೃತಿಗಳನ್ನು ಆಳವಾಗಿ ಕಲಿಯುವವರು ಸಂಗೀತವನ್ನು ಮುಂದುವರೆಸಬಹುದು. ಯಾವುದೇ ಕ್ಷೇತ್ರವಿರಲಿ ಕಲಿಕೆಗೆ ಕೊನೆ ಎಂಬುದು ಇಲ್ಲ. ಎಲ್ಲಿವರೆಗೆ ಸಂಗೀತ ಕಲಿಯಬೇಕು? ಎನ್ನುವವರಿಗೆ ಇದು ಸರಿಯಾದ ಸಲಹೆ.
ಗೀತೆಗಳ ಮೊದಲೇ ಸಂಗೀತ ಕಲಿಕೆ ನಿಲ್ಲಿಸಿದರೆ ಅದು ಹೆಚ್ಚು ಕಡಿಮೆ ನಿರರ್ಥಕ ಎಂದೇ ತಿಳಿಯಬೇಕು. ಹೆಚ್ಚಿನವರು ಇಂಥ ತಪ್ಪು ನಿರ್ಧಾರ ಮಾಡುತ್ತಾರೆ.
ಈ ವಿಡಿಯೋದಿಂದ ಆರಂಭವಾಗುವ ಗೀತೆಗಳ ಸರಣಿಯಲ್ಲಿ ಅವಶ್ಯಕವಾಗಿರುವ 12 ಗೀತೆಗಳನ್ನು (8 #ಸಂಚಾರಿಗೀತೆಗಳು + 4 #ಲಕ್ಷಣಗೀತೆಗಳು ) ತಾಳ್ಮೆ ಹಾಗೂ ಏಕಾಗ್ರತೆಯಿಂದ ಕಲಿತರೆ, ನಿಮ್ಮಲ್ಲಿ ಸಂಗೀತ ಕಲಿಯುವ ಆಸಕ್ತಿ, ಹಾಡುವ ಆತ್ಮವಿಶ್ವಾಸ ಹೆಚ್ಚಾಗಿ, ಮುಂದಿನ ಸಂಗೀತ ಕಲಿಕೆಯ ನಿರ್ಧಾರ ನೀವೇ ತೆಗೆದುಕೊಳ್ಳುವಷ್ಟು ಸಮರ್ಥರಾಗುತ್ತೀರಿ.
ಈ ನಿಟ್ಟಿನಲ್ಲಿ ಪೂರಕ ಮಾಹಿತಿಗಳೊಂದಿಗೆ, ಸರಳವಾಗಿ, ಪರಿಣಾಮಕಾರಿಯಾಗಿ ಸಂಗೀತ ಕಲಿಸುವ Music in Kannada ಚಾನೆಲ್ ಸಮರ್ಥ ಮಾರ್ಗದರ್ಶಿಯಾಗಿ ನಿಲ್ಲುತ್ತದೆ.
.......... SUBSCRIBE ಮಾಡಿ .......... LIKE ಮಾಡಿ ..........
ವಿಡಿಯೋ ಭಾಗಗಳು:
1. ಪೀಠಿಕೆ : 0:00
2. ವಿವರಣೆ : 8:37
3.ವಾದ್ಯಗಳೊಂದಿಗೆ ಗಾಯನ : 16:33

show more

Share/Embed