Havyaka hale hadu| ಶ್ರೀ ಶ್ರೀಧರ ಚರಿತ್ರೆ | |Shri Shridhara Swami Charitre| Sung By Mangalagouri
HomeStar Channel HomeStar Channel
1.51K subscribers
30,259 views
356

 Published On Mar 20, 2024

ಸಾಹಿತ್ಯ :
ಶಿಷ್ಟ ಜನರೊದ್ಧಾರಕಾಗಿಯೆ ಅರ್ಥಿಯಲಿ ಶ್ರೀಧರರು ಬೇಗನೆ |
ಸೃಷ್ಟಿಯೊಳಗವತಾರ ಗೈದರು ಮನುಜ ರೂಪಿನಲಿ |

ಬಂದು ಪಾದಕ್ಕೆರಗಿದವರನು ಚಂದದಿಂದಲಿ ಕಾಯ್ವ ಗುರುವರ
ಮಂದಮತಿ ಜನರೆಲ್ಲ ನೆನೆಯಿರಿ ಗುರುಪದಾಂಬುಜವಾ |

ಭಾವಭಕುತಿಯೊಳವರ ಪೂಜಿಸಿ ನೀವು ಬ್ರಹ್ಮಾನಂದ ಪಡೆಯಿರಿ |
ಯಾವ ಸಂಶಯ ಬೇಡ ಗುರುವಿನ ಪಾದವೇ ಗತಿಯು |

ಯಾರು ಪೋಗದ ಮನೆಗೆ ಪೋಪರು ಯಾರಿಗಾಗದ ಮನೆಗೆ ಪೋಪರು |
ದಾರಿ ಕಾಣದ ಜನಕೆ ಜ್ಞಾನದ ಬೆಳಕ ತೋರ್ದಪರು |

ಒಂದು ಊರೊಳು ವಿಪ್ರ ತನುಜೆಯು ಚಂದದಿಂದಲಿ ಗುರುವ ಪೂಜಿಸಿ |
ಅಂದು ಶ್ರದ್ಧಾ ಭಕ್ತಿಯಿಂದ ಶ್ರೀ ಗುರುವ ಧ್ಯಾನಿಸಲು |

ಕಂಡು ಆಕೆಯ ಮನದ ಬಯಕೆಯ ಬಂದ ಆಕೆಯ ಮನೆಗೆ ಗುರುವರ |
ಕೊಂಡು ಪೂಜೆಯ ತಿರುಗಿ ಪೋದರು ಭಕ್ತರಿದ್ದೆಡೆಗೆ |

ಒಂದು ಊರೊಳು ಭಿಕ್ಷೆ ಮುಗಿಯಿತು ಚಂದದಿಂದಲಿ ಗುರುವು ಕೇಳಿದ |
ಬಂದ ಜನರಿಗೆ ತೀರ್ಥ ಪ್ರಸಾದವು ಆಯಿತೋ ಹೇಗೆ |

ಎಂದ ಮಾತನು ಕೇಳಿ ವಿಪ್ರನು ನೊಂದು ನಮಗೆಲ್ಲರಿಗು ಆಯಿತು |
ಕಂದನಿಹನೋದುತ್ತ ಬೇರೆಡೆಗವನಿಗಿಲವಲ್ಲಾ|

ಆದರಾಗಲಿ ಕಳಿಸಿಕೊಡುವೆನು ಅದಕೆ ವ್ಯಥೆ ಪಡಬಾರದೆಂದರು |
ಸ್ವಾಮಿ ಗುರುವರು ಕಳಿಸಿಕೊಟ್ಟರು ತೀರ್ಥ ಪ್ರಸಾದವನು |

ಗಾಢ ನಿದ್ರೆ ಯೊಳಿರುವ ಮಗನಿಗೆ ಶ್ರೀಧರರು ತಾ ಬಂದು ತೀರ್ಥ ಪ್ರಸಾದವನು ಮುದದಿಂದ ಕೊಟ್ಟಂತಾಯಿತೇನೆಂಬೆ |

ಬಲದ ಹಸ್ತದಿ ತೀರ್ಥ ಬಿದ್ದಿತು ತಲೆಯ ಮೇಲಕ್ಷತೆಯ ಕಂಡನು
ಒಲುಮೆ ಮಂತ್ರಾಕ್ಷತೆಯ ಶ್ರೀ ಗುರುವಿಂದ ತಾ ಪಡೆದಾ |

ಒಡನೆ ಬರೆದನು ಮನೆಗೆ ಪತ್ರವ ನಡೆದ ಸ್ವಪ್ನದ ಸಂಗತಿಗಳನು
ಮುದದಿ ಪತ್ರವ ನೋಡಿ ಕೊಂಡಾಡಿದರು ಗುರುವರನಾ |

ಊರ ಜನರಿಗೆ ಪೀಡೆ ಕೊಡುತಿಹ ಕ್ರೂರ ಭೂತ ಪ್ರೇತಗಳ ತಾ |
ದೂರಗೊಳಿಸುತ ಹಲವು ಭಜಕರ ಪಾಲಿಸಿಹ ಗುರುವು |

ಒಂದು ದಿನ ಶ್ರೀಧರರು ಸಾಗರವೆಂಬ ಊರೊಳು ಇದ್ದ ಸಮಯದಿ |
ಬಂದು ಪೇಳ್ದರು ಗುರುವೆ ಹಾಲೇ ಸಿಗದು ಮುಂದೇನು |

ಎಂದ ಮಾತನು ಕೇಳಿ ಗುರುವರ ಒಂದು ಕೊಡ ನೀರನ್ನು ತರಿಸಿ
ಅಂದು ಮಂತ್ರಾಕ್ಷತೆಯ ತಳಿಯಲು ನೀರು ಹಾಲಾಯ್ತು |

ಒಂದು ಊರಲಿ ವಿಪ್ರನೋರ್ವನು ಹಿಂದಿನಿಂದಲಿ ಹೀನ ಸ್ಥಿತಿಯಲಿ
ಬೆಂದು ಬಳಲುತ್ತಿದ್ದ ಸೌಖ್ಯದ ದಾರಿ ಕಾಣದಲೆ |

ಬಂದ ಗುರುವಿನ ಸುದ್ದಿಕೇಳುತ ಒಂದೆ ಮನದಲಿ ಓಡಿಬಂದನು
ವಂದನೆಯ ಮಾಡುತ್ತ ಕುಳಿತನು ಸ್ವಾಮಿಎದುರಿನಲಿ |

ಚಿಂತೆಯೇತಕೆ ಮಗನೆ ನೀ ನಿಶ್ಚಿನ್ತೆಯಲಿ ಪೇಳ್ ನಿನ್ನ ವಿಷಯವ
ಎಂತು ಪೇಳಲಿ ಗುರುವೆ ಎನ್ನಯ ಹೀನ ಸ್ಥಿತಿಗತಿಯಾ |

ಗುರುವು ಕೌಳಿಗೆ ನೀರು ತರಿಸುತ ಕರದಿ ಮಂತ್ರಾಕ್ಷತೆಯ ತಳಿದರು |
ತೆರೆಯದಿರು ಮಗನೆ ನೀ ನಿನ್ನಯ ಮನೆಗೆ ಪೋಗೊತನಕ |

ಶಿರದೊಳಾತನು ಗುರುವ ಆಜ್ಞೆಯ ಗುರುವ ಸ್ಮರಿಸುತ ಮನೆಗೆ ನಡೆದನು
ಹರುಷಮಿಗೆ ಬಂಗಾರವಾದುದ ಕಂಡನಾ ವಿಪ್ರ |


ಧರೆಯೊಳಗೆ ವರ ಶೀಗೇಹಳ್ಳಿಯೊಳಿರಲು ಶ್ರೀ ಗುರು ಶ್ರೀಧರಾರ್ಯನು |
ಗುರುವರನ ದರ್ಶನಕನೇಕರು ಬಂದಿರಲು ಕಂಡೆ |

ಮೆರೆವ ಚಪ್ಪರಕಾಗ ಹೊತ್ತಿತು ಉರಿಯು ಜನ ಕಂಗೆಡಲು ಸದ್ಗುರು
ವರನು ಕರತೀರ್ಥದಲಿ ಅಗ್ನಿಯ ಶಾಂತಿಗೊಳಿಸಿದನು |

ನಾಗವಿಷದಿಂ ಪಶುವು ಬೀಳಲು ಯೋಗಿಗುರುವರ ಭೂರಿದಯದಿನ್
ಆಗ ತೀರ್ಥವ ಹೊಡೆಯೆ ಪಶು ಜೀವಿಸಿತು ಚೋದ್ಯವಲಾ |

ಶುದ್ಧ ಮೂರುತಿ ಗುರುಮಹಿಮೆಯನಾ ಬುದ್ಧಿ ಹೀನನು ಬಣ್ಣಿಸಿಹೆ ತಡ
ಶುದ್ಧವಪ್ಪುದು ಸಹಜ ಬುಧಜನ ತಿದ್ದಿಓದುವುದು |

ಹೊದ್ದದೆಂದಿಗು ಪಾಪ ಲೇಶವು ಶುದ್ಧ ಭಾವದಿ ಗುರುವ ಭಜಿಸಲು
ಸದ್ಗುರುವು ರಕ್ಷಿಪನು ಸಂತತ ತನ್ನ ನೆನೆವರನು |

ರಾಮ ರಾಮ ರಾಮ ರಕ್ಷಿಸು ರಾಮ ರಾಮ ರಾಮ ರಕ್ಷಿಸು |
ರಾಮ ರಾಮ ರಾಮ ರಕ್ಷಿಸು ರಾಮ ಶ್ರೀ ರಾಮ ||





#bhajan #trending #bhakti #havyakasongs #youtube #peace #india #indian #devotional #shriram #shri #shridharaswami #gurucharitramarathi #gurucharitre #swami #saint #havyakahalehadu #homestar #mangalagouri #kannadabhajan #kannada #samartharamdas #varadahalli #sagara #sirsi #havyakarecipe #havyakaaduge #temple #indiantemples #indiansaints #himalayas #gurudev #gurudevdatta #guru #gurujibhajan #blessings #ashram #yogi #baba #lord #god

show more

Share/Embed