ಇಂಥಾ ಗುರುಗಳ ಕಾಣೆನೋ | ಶ್ರೀ ಶ್ಯಾಮಸುಂದರ ದಾಸರು | Intha Gurugala Kaneno | Sri Shyamasundara Dasaru
Bhajane - Dasara Hadugalu ಭಜನೆ - ದಾಸರ ಹಾಡುಗಳು Bhajane - Dasara Hadugalu ಭಜನೆ - ದಾಸರ ಹಾಡುಗಳು
18.8K subscribers
1,742 views
73

 Published On Aug 19, 2024

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ಇಂಥಾ ಗುರುಗಳ ಕಾಣೆ ನಾ ಭೂತಳದೊಳು
ಇಂಥಾ ಯತಿಗಳ ಕಾಣೆ ನಾ ||ಪ||

ಇಂಥಾ ಗುರುಗಳ ಕಾಣೆ ಮಂತ್ರಮಂದಿರದಲ್ಲಿ
ನಿಂತು ಭಜಕರಿಗೆ ಚಿಂತೆ ಕಳೆವ ಕರುಣಿ ||ಅ.ಪ||

ದೇವಸ್ವಭಾವನೀತನು ಸತತ ಪವನ-
ದೇವನಾವೇಶಯುಕ್ತನು
ಆವಸಂಶಯವ್ಯಾಕೆ ದೇವಾಧಿದೇವ ನರಮೃಗ-
ದೇವನೀತನ ಭಕ್ತಿಗೆ ಧಾವಿಸಿ ಬಂದ ಸ್ತಂಭದಿ
ಭಾವಭಕ್ತಿಯಲಿ ಸೇವಿಪರಿಗೆ ಭವ
ನೋವು ಕಳೆದು ಸುರಗೋವಿನ ತೆರ ವರ-
ವೀವನು ಕರುಣದಿ ಕಾವನು ಪರಮ
ಪಾವನ ಚರಿತನು ಕೋವಿದರೊಡೆಯನು ||೧||

ವರಹಜತಟದಲ್ಲಿರುವ ಭಕ್ತರು ಕೂಗಿ
ಕರೆದಲ್ಲಿಗೋಡಿಬರುವ
ಮರುತಶಾಸ್ತ್ರದ ಮರ್ಮಭರಿತವಾದಂಥ ದಿವ್ಯ
ಪರಿಮಳಗ್ರಂಥವ ವಿರಚಿಸಿ ಬುಧರಿಗೆ
ಗರೆದನು ಕರುಣದಿ ಪೊರೆದನು ಪರಮತ
ಮುರಿದನು ಜಗದೋಳ್ ಮೆರೆದನು ಹೊಸ ಹೊಸ
ಪರಿ ಸುಮಹೋತ್ಸವ ಹರುಷದಿ ಪ್ರತಿದಿನ
ಗುರುಸುಯಮೀಂದ್ರರ ಕರದಿಂ ಗೊಂಬರು ||೨||

ಮಂದಜಾಸನಜನಕ ಶ್ರೀವರಶ್ಯಾಮ-
ಸುಂದರನಂಘ್ರಿ ಸೇವಕ
ಕಂದರ್ಪಶರಕರಿವೃಂದಕೇಸರಿಎನಿಸಿ
ಗಂಧವಾಹನಮತಸಿಂಧುವಿಗೆ ಶಶಿ-
ಯಂದದಿ ರಾಜಿಸಿ ವೃಂದಾವನವನು
ಒಂದೆ ಮನದಲಿ ವಂದಿಸಿ ನಮಿಸುವ
ವಂದ್ಯಾಂಧಕರಿಗೆ ಕಂದರಕ್ಷಿಗಳ
ಕುಂದದೆ ಕೊಡುವ ಕರ್ಮಂದಿಕುಲಾಗ್ರಣಿ ||೩||

iMthaa gurugaLa kaaNe naa bhUtaLadoLu
iMthaa yatigaLa kaaNe naa ||pa||

iMthaa gurugaLa kaaNe maMtramaMdiradalli
niMtu bhajakarige ciMte kaLeva karuNi ||a.pa||

dEvasvabhaavanItanu satata pavana-
dEvanaavESayuktanu
AvasaMSayavyaake dEvaadhidEva naramRuga-
dEvanItana bhaktige dhaavisi baMda staMbhadi
bhaavabhaktiyali sEviparige bhava
nOvu kaLedu suragOvina tera vara-
vIvanu karuNadi kaavanu parama
paavana caritanu kOvidaroDeyanu ||1||

varahajataTadalliruva bhaktaru kUgi
karedalligODibaruva
marutaSaastrada marmabharitavaadaMtha divya
parimaLagraMthava viracisi budharige
garedanu karuNadi poredanu paramata
muridanu jagadOL meredanu hosa hosa
pari sumahOtsava haruShadi pratidina
gurusuyamIMdrara karadiM goMbaru ||2||

maMdajaasanajanaka SrIvaraSyaama-
suMdaranaMGri sEvaka
kaMdarpaSarakarivRuMdakEsarienisi
gaMdhavaahanamatasiMdhuvige SaSi-
yaMdadi raajisi vRuMdaavanavanu
oMde manadali vaMdisi namisuva
vaMdyaaMdhakarige kaMdarakShigaLa
kuMdade koDuva karmaMdikulaagraNi ||3||

show more

Share/Embed