16.0- Useful information: 30 Days Deadline for Electricity bill payment, HESCOM, HUBLI,
TECH GURU S HIREMATH TECH GURU S HIREMATH
329 subscribers
8 views
1

 Published On Sep 28, 2024

16.0- ಉಪಯುಕ್ತ ಮಾಹಿತಿ : ವಿದ್ಯುತ್ ಬಿಲ್ ಪಾವತಿಗೆ 30 ದಿನ ಗಡುವು, ಹೆಸ್ಕಾಂ, ಹುಬ್ಬಳ್ಳಿ.


ವಿದ್ಯುತ್ ಬಿಲ್‌ ಪಾವತಿಗೆ 30 ದಿನ ಗಡುವು ಹುಬ್ಬಳ್ಳಿ: ವಿದ್ಯುತ್ ಬಿಲ್ ನೀಡಿದ ನಂತರದ 30 ದಿನಗಳೊಳಗೆ బిలా ಪಾವತಿಸದಿದ್ದಲ್ಲಿ ನಿಯಮಾವಳಿಯನ್ವಯ ಅಂಥ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೆಸ್ಕಾಂ ಮುಂದಾಗಿದೆ. » ಅ.1ರಿಂದಲೇ ಈ ನಿಯಮ ಕಟ್ಟುನಿಟ್ಟಾಗಿ ಜಾರಿ, ಈ ಕುರಿತು ಪ್ರಕಟಣೆ ನೀಡಿರುವ ಹೆಸ್ಕಾಂ ಅಧಿಕಾರಿಗಳು, ಅ. 1ರಿಂದಲೇ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಗೃಹ ಮತ್ತು ವಾಣಿಜ್ಯ ಬಳಕೆದಾರರು, ಹಾಗೂ ತಾತ್ಕಾಲಿಕ ಅಪಾರ್ಟ್‌ಮೆಂಟ್‌ಗಳು, ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್ ಪಾವತಿಸಬೇಕು. ಇಲ್ಲದಿದ್ದಲ್ಲಿ ಮೀಟರ್ ರೀಡಿಂಗ್‌ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಹೆಸ್ಕಾಂ ಕೋರಿದೆ. ಈವರೆಗೆ, ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್ ಓದಿದ ಬಳಿಕ, ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಲೈನ್ ಮನ್‌ಗಳ ಜತೆ ಮಾಪಕ ಓದುಗರು ತೆರಳುತ್ತಿದ್ದರು. ಇನ್ನು ಮುಂದೆ ಬಿಲ್ ನೀಡುವ ಸಮಯದಲ್ಲಿಯೇ ಮಾಪಕ ಓದುಗರೊಂದಿಗೆ ಲೈನ್‌ಮೆನ್ ತೆರಳಲಿದ್ದಾರೆ. ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಿದ್ದಾರೆ. ವಿದ್ಯುತ್ ಬಿಲ್ ಪಾವತಿಗೆ ಯಾವುದೇ ಬಡ್ಡಿ ಇಲ್ಲದೆ 15 ದಿನ ಕಾಲಾವಕಾಶ ನೀಡಲಾಗುತ್ತದೆ. ಆ ನಂತರವೂ ಬಡ್ಡಿ ಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ಇರುತ್ತದೆ. ಆದರೂ ಗ್ರಾಹಕರು ಬಿಲ್ ಪಾವತಿಸದಿದ್ದಲ್ಲಿ ಮುಂದಿನ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ. ವಿದ್ಯುತ್ ಬಾಕಿ ಮೊತ್ತ ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂ.ಗಳಿಗಿಂತ ಅಧಿಕವಾಗಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಸಹ ಕಡಿತಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ರಸೀದಿ ಹಾಜರುಪಡಿಸಲು ಸೂಚನೆ: ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಿದ ಸಂದರ್ಭದಲ್ಲಿ ಕೆಲಮೊಮ್ಮೆ ಹೆಸ್ಕಾಂ ತಂತ್ರಾಂಶದಲ್ಲಿ (ಸಾಫ್ಟ್‌ವೇರ್) ತಾಂತ್ರಿಕ ದೋಷದಿಂದಾಗಿ ವಿವರ ನಮೂದಾಗದೇ ಇದ್ದಾಗ, ಹಿಂದಿನ ಬಿಲ್ ಮೊತ್ತವನ್ನು ತೋರಿಸುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಹೆಸ್ಕಾಂ ಸಿಬ್ಬಂದಿಗೆ ಆನ್‌ಲೈನ್‌ನಲ್ಲಿ ಬಿಲ್ ಪಾವತಿಸಿದ ರಸೀದಿ ತೋರಿಸಿದರೆ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಹೆಸ್ಕಾಂ ತಿಳಿಸಿದೆ.

show more

Share/Embed