Chandramouleshwara Temple Hubli | ​⁠
Rohan Ronu Rohan Ronu
708 subscribers
153 views
12

 Published On Sep 11, 2024

~ಚಂದ್ರಮೌಳೇಶ್ವರ ದೇವಾಲಯ~
ಕ್ರಿ.ಶ. 12ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣವಾಗಿರುವ ಈ ದೇವಾಲಯವು ಪ್ರದಕ್ಷಿಣ ಪಥ, ಅಂತರಾಳ ಮತ್ತು ಮುಖಮಂಟಪವನ್ನು ಒಳಗೊಂಡ ಸರ್ವತೋಭದ್ರ ಪ್ರಕಾರದ ಗರ್ಭಗೃಹವನ್ನು ಹೊಂದಿದೆ. ಮೂಲತಃ ಇದರಲ್ಲಿ ಚತುರ್ಮುಖ ಲಿಂಗವನ್ನು ಪ್ರತಿಷ್ಠಾಪಿಸಿರಬಹುದು. ಪ್ರಸ್ತುತ ಈ ಲಿಂಗವು ಪಶ್ಚಿಮ ದಿಕ್ಕಿನಲ್ಲಿರುವ ಮುಖಮಂಟಪದಲ್ಲಿ ಕಂಡುಬರುತ್ತದೆ. ದೇವಾಲಯದ ಪ್ರವೇಶದ್ವಾರವು ಪಂಚಶಾಖೆಗಳನ್ನೊಳಗೊಂಡ ದ್ವಾರಪಾಲಕರನ್ನು ಹೊಂದಿದೆ. ಇನ್ನುಳಿದ ಭಾಗಗಳಲ್ಲಿ ಚಾಮರಧಾರಿಗಳು ಮತ್ತು ರತಿ-ಮನ್ಮಥರ ಶಿಲ್ಪಗಳು ಕಂಡುಬರುತ್ತವೆ. ಮುಖಮಂಟಪದ ಪೂರ್ವ ಪ್ರವೇಶದ್ವಾರದ ಎರಡೂ ಭಾಗಗಳಲ್ಲಿ ಸಂಗೀತಗಾರರ, ನರ್ತಕಿಯರು ಹಾಗೂ ಬಳ್ಳಿಯಾಕಾರದ ಕೆತ್ತನೆಗಳನ್ನೊಳಗೊಂಡ ಎರಡು ಜಾಲಂಧರಗಳು ಇವೆ. ಕಟ್ಟಿಗೆಯ ಮೇಲೆ ಕೆತ್ತಲ್ಪಡುವ ಕಲಾಕೃತಿಯ ಮಾದರಿಯಂತೆ ಕಲ್ಲಿನಲ್ಲಿ ಕೆತ್ತಲಾದ ಕಲಾಕೃತಿಗಳಿಗೆ ಇವು ಉತ್ಕೃಷ್ಟ ಉದಾಹರಣೆಯಾಗಿದೆ. ಅಧಿಷ್ಠಾನ ಭಾಗವು ಅಶ್ವದಳ ಹಾಗೂ ಆನೆಗಳ ಕೆತ್ತನೆಯು ಸುಂದರ ಕಲಾಕೃತಿಯೊಂದಿಗೆ ಕಂಡುಬರುತ್ತದೆ. ದೇವಾಲಯದ ಹೊರ ಭಿತ್ತಿಯಲ್ಲಿ ಬ್ರಹ್ಮ, ವಿಷ್ಣು ವಿಭಿನ್ನ ಅವತಾರಗಳೊಂದಿಗೆ ಹಾಗೂ ಶಿವನ ವಿಭಿನ್ನ ರೂಪಗಳೊಂದಿಗೆ ಮತ್ತು ಬೇರೆ ಬೇರೆ ದೇವತೆಗಳನ್ನು ಕೆತ್ತಲಾಗಿದೆ. ದೇವಾಲಯದ ಹೊರಭಿತ್ತಿಯಲ್ಲಿ ಶಿಖರಗಳಿಂದ ಅಲಂಕೃತವಾದ ಚಿಕ್ಕ ಪ್ರಮಾಣದ ದೇವಕೋಷ್ಠಕಗಳಿವೆ.

show more

Share/Embed