ಕಂಡೆ ನಾ ನರಸಿಂಹನಾ | ಶ್ರೀ ಕನಕದಾಸರ ಕೃತಿ | Kande Naa Narasimhana | Sri Kanaka Dasaru | ಭಜನೆ | Bhajane
Bhajane - Dasara Hadugalu ಭಜನೆ - ದಾಸರ ಹಾಡುಗಳು Bhajane - Dasara Hadugalu ಭಜನೆ - ದಾಸರ ಹಾಡುಗಳು
18.8K subscribers
3,466 views
85

 Published On Nov 29, 2023

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ಕಂಡೆ ನಾ ತಂಡ ತಂಡದ ಹಿಂಡು ದೈವ
ಪ್ರಚಂಡ ರಿಪುಗಂಡ ಉದ್ದಂಡ ನರಸಿಂಹನಾ ||ಪ||

ಗುಡು ಗುಡುಸಿ ಕಂಭದಲಿ ದಡದಡ ಸಿಡಿಲು
ಸಿಡಿಯೆ ಹಿಡಿಹಿಡಿಸೆ ನುಡಿಯಡಗಲೊಡನೆ ಮುಡಿಹಿಡಿದು |
ಗಡಗಡನೆ ನಡುನಡುಗೆ ಗುಡುಗುಡಿಸಿ ಸಭೆ
ಬೆದರೆ ಹಿಡಿ ಹಿಡಿದು ಹಿರಣ್ಯಕನ ತೊಡೆಯಲ್ಲಿ ಕೆಡಹಿದನಾ ||೧||

ಉರದೊಳಪ್ಪಳಿಸಿ ಅರಿ ಶಿರವ ಸರಸರ ಸೀಳಿ
ಪರಿಪರಿಯಲೀ ಚರ್ಮ ಎಳೆದೆಳೆದು ಎಲುಬು ನರ
ನರವನ್ನು ತೆಗೆದು ನಿರ್ಗಧಿಕ ಶೋಣಿತ ಸುರಿಯೆ
ಹರಿಹರಿದು ಕರುಳ ಕೊರಳೊಳಗೆ ಇಟ್ಟವನ ||೨||

ಪುರಜನರು ಹಾ ಎನಲು ಸುರರು ಹೂ
ಮಳೆಗೆರೆಯೇ ತರತರದ ವಾದ್ಯ ಸಂಭ್ರಮಗಳಿಂದ |
ಹರಿಹರಿಯೇ ಶರಣೆಂದು ಸ್ತುತಿಸಿ ಶಿಶು
ಮೊರೆಯಿಡುವ ಕರುಣಾಳು ಕಾಗಿನೆಲೆಯಾದಿ ಕೇಶವನ ||೩||

kaMDe nA taMDa taMDada hiMDu daiva
pracaMDa ripugaMDa uddaMDa narasiMhanA ||pa||

guDu guDusi kaMBadali daDadaDa siDilu
siDiye hiDihiDise nuDiyaDagaloDane muDihiDidu |
gaDagaDane naDunaDuge guDuguDisi saBe
bedare hiDi hiDidu hiraNyakana toDeyalli keDahidanA ||1||

uradoLappaLisi ari Sirava sarasara sILi
paripariyalI carma eLedeLedu elubu nara
naravannu tegedu nirgadhika SONita suriye
hariharidu karuLa koraLoLage iTTavana ||2||

purajanaru hA enalu suraru hU
maLegereyE taratarada vAdya saMBramagaLiMda |
harihariyE SaraNeMdu stutisi SiSu
moreyiDuva karuNALu kAgineleyAdi kESavana ||3||

show more

Share/Embed