Devalokada Budibudiki songs | mhahadevappa Valkamdinni |
Mahadevappa valkamdinni Presents Mahadevappa valkamdinni Presents
14.3K subscribers
65,776 views
656

 Published On Jan 1, 2021

Devalokada Budibudiki songs | mhahadevappa Valkamdinni |

Copyright Notice : Please feel free to leave me a notice if you find this upload inappropriate . Contact me personally if you are against an upload which You may have rights to the Images ( or ) music , instead of contacting YouTube about a Copyright Infringement .... Thank You .. ! "
my channel phone number:-9148226975

singers is my father:-
mahadevappa Nayaka valkamdinni
phone number 9945342819
subscribe to my channel
   / bajanasongno1  

and press bell icon
_________________________________________
songs:~
singer:~
music:~
dholak:~
label. :~mahadevappa valkamdinni present
_________________________________________
follow me Facebook link:~
  / khasi.nayak.1  
_________________________________________
mor songs update contact number:~
9148226975
________________________________________

tags:~
#Devalokada Budibudiki songs mhahadevappa Valkamdinni,
#Mahadevappa Tata Bajana Songs,
Budi budiki song,
Deva devaru devalokada Budibudiki,
Devalokada Budibudiki songs mhahadevappa Valkamdinni,
devalokada Budbudki,
devalokada Budubudaky full songs mahadevappa,
   • Telugu bajana songs|best songs| mhaha...  
ದೇವಲೋಕದ ಬುಡಿ ಬುಡಕಿ ನಾನು,
mahadevappa Budibudiki songs,
mahadevappa Deva devaru devalokada Budubudaky,
Devalokada Budibudiki songs|| mhahadevappa Valkamdinni||

ವಿವರಣೆ:-
ದೇವ ದೇವರ ದೇವರ ಮಗನು | ದೇವಲೋಕದ ಬುಡ ಬುಡಕ್ಕಾ ನಾನು | ದೇಹದ ಮರ್ಮವ ಎಲ್ಲನು ಬಲ್ಲೆ | ಭಾವ ಶುದ್ದವಾಗಿ ಕೇಳವ್ವ ತಂಗಿ | ಉಪಾಯವೊಂದು ನಿನಗೇಳುವೆನವ್ವ | ಕಾಯದೊಳಗೆ ಒಂದು ದೇವಾರುಂಟು |


ಪಡುವಣ ದಿಕ್ಕಿನ ಬುಡಬುಡಕ್ಕಾ ನಾನು | ಮೂಡಲ ದೇಶವ ನೋಡಲಿಕ್ಕೆ ಬಂದೆ | ಬೇಡಿ ಬೇಡಿದ್ದನ್ನು ಹೇಳುವನವ್ಯಾ | ರೂಢಿಯೊಳಗೆ ನಾನಾಡುವ ತಾಯಿ |

ಹತ್ತು ಮಂದಿ ದಶಪಾಲಕರು | ನಿನ್ನತ್ತಿರಲಿರುವರು ನೋಡಪ್ಪ ಮಗಳೇ | ಚಿತ್ತ ಶುದ್ಧವಾಗಿ ಕೇಳವ್ವ ತಂಗೀ | ಸತ್ಯವಾಗಿ ನಾ ಹೇಳುವೆನವ್ಯಾ |


ಸ್ಥೂಲ ಸೂಕ್ಷ್ಮ ಕಾರಣ ದೇಹಗಳು | ಮೂಲ ಪ್ರಮವು ನಿಂತವು ಮಗಳೇ | ಮೂಲ ಅಹಂಕಾರದ ನಲಿಯನು ಇಳಿಯ ಶ್ರೀಲು ಶಿಳಿದು ಕೊಂಡಿರಬೇಕವ್ವಾ |


ಜಾಗ್ರ , ಸುಷುಪ್ತಿ ಸ್ವಪ್ನದೊಳಗೆ | ಶೀಘ್ರದಿಂದ ಶಿವ ಇರುವನು ತಂಗಿ | ಜಾಗ್ರತೆಯಿಂದ ತಿಳಕೊಳ್ಳುವ ಮಗಳೇ || ಮಹಾಜ್ಞಾನಿ ಗುರು ಬಂದಿರುವಾನು |



ತೈಲವಿಲ್ಲದೂಂದು ಜ್ಯೋತಿಯುಂಟು | ತಲೆಯೊಳಗಡರು ತನ್ನ ಮಗಳೇ || ನಯನ ಹಿಡಿದು ನೀ ನೋಡವ ತಂಗಿ , ಬೈಲಿಗೆ ಬೈಲಾಗೋಯಿತಾ |

ನಾಲ್ಕು ಯುಗದೊಳಗಡಗಿದ್ದೆ ನಾನು | ಲೋಕದೊಳಗೆ ಬಹು ಅಲೆದಾಟವ್ವ | ಸಾಕಾರವಾಗಿ ಬಂದೀನಿ ತಾಯಿ | ಸಾಕು ಮಾಡಿಕೊ ಭವಗಳ ತಂಗೀ ||

ಕಲ್ಯಾಣದಲ್ಲಿ ಪುಟ್ಟಿದ ಮಗಳೇ | ಕಲ್ಲು ದೇವರನ್ನು ಕುಟ್ಟುತ ಬಂದೆ | ಎಲ್ಯಾ ಶಾಸ್ತ್ರವ ಕಟ್ಟಿಡು ತಂಗಿ | ಅಲ್ಲಮ ದೇವರ ದೇವಾ ನಾನು |


ಆಕಾಶದೊಳಿದ್ದನು ಮಗಳ | ಏಕಾದಶಿಗೆ ಬಂದು ನಿಂತೆನು ನಾನು | ನೂಕಾಡಿದರೆ ತೊರೆ ದಿನವಿಲ್ಲಮ್ಮ | ಯಾಕೆ ಬೇಕು ಸಾಕು ಸಂಸಾರ ತಾಯಿ |


ಮರಣದ ಬಾಗಿಲು ತೆರೆದವು ಮಗಳೇ | ಪರಿಣಾಮವು ಇಲ್ಲಿ ನಿನಗವ್ವ ತಾಯಿ | ಪರಕಾಯದೊಳೆಲೆ ದೊಯ್ಯಾರ ತಂಗಿ | ತಿರುಗಿ ತಿರುಗಿ ನೀ ಬರಬೇಕವ್ವ |


ಹದಿಮೂರು ಮುತ್ತು ನಿನ್ನೊಳಗಮ್ಮ | ಅದರೊಳಗೊಂದು ರತ್ನಯಿರುವುದು ತಾಯಿ ಕದಲದ ಮನದೋಳ್ ನೋಡವ್ವ ಮಗಳೇ | ಚದುರ ತನದಿ ನೀ ಧರಿಸವ್ವ ತಂಗೀ |


ಯಾವ ದೇವರೂ ದೇವಾರಲ್ಲ ವಾಯು ದೇವರು ದೇವಾನಮ್ಮ| ಜೀವವು ಅದರೊಳಗಿರುವದು ತಾಯಿ | ಸಾವು ಇಲ್ಲದೊಂದು ಗಿಡವುಂಟಮ್ಮ


ಹುಟ್ಟು ಮಾರ್ಗದಲಿ ಹೋಗವ್ವ ಮಗಳೇ | ಹುಟ್ಟಿನ ಗಿಡದಡಿಯಲಿ ಮಲಗವ್ವ ತಂಗೀ | ಬಿಟ್ಟೆಲೆಯನು ತರಬೇಕವ್ವ ಮಗಳೇ | ಮುಟ್ಟದ ಲಿಂಗಕೆ ನೀಡಬೇಕಮ್ಮಾ |


ಬ್ರಹ್ಮ , ವಿಷ್ಣು , ರುದ್ರೇಶ ಸದಾಶಿವ | ಮರ್ಮವನ್ನು ನಾ ಹೇಳಲಿ ಬಂದೆ | ಕರ್ಮ ದೇಹಿಗಳು ಅವರೇ ತಾಯಿ || ಧರ್ಮದ ಮಾರ್ಗವ ಅರಿಯಾರಮ್ಮ


ಯಡಮುರಿ ಶಾಸ್ತ್ರವ ತಂದೀನಿ ಮಗಳೇ | ಧೃಡದಿಂದ ಲಾಲಿಸಿ ಕೇಳವ್ವ ತಂಗೀ | ಸಡಗರ ದೊಡವಿಯ ಕೊಡಬಂದೀನಿ | ಮೃಡಾನ್ಮಗ ಬುಡಬುಡಕ್ಕಾ ನಾನು |

ಲೋಕದಂಥ ಬುಡ ಬುಡಕ್ಕಾ ನಾನಲ್ಲ | ಏಕಾಂಗಿ ಬುಡು ಬುಡುಕ್ಕಾ ನಾನು | ಜ್ಞಾಕಿಲಿ ತಿಳುಹಿಸಿ ಕೊಡುವೆನು ಬಾರೆ | ಮೂಕಳಾಗಿ ನೀ ಯಿರಬೇಕಮಾ |

ಸಾಂಖ್ಯ ತರ್ಕ ಅಮನಸ್ಸಗಳೂಡಿರು | ಬಹು ಕಿಂಕರ ವೃತ್ತಿಯ ತಿಳಿಬೇಕು ಮಗಳೆ ಅಹಂಕಾರ ಗುಣಗಳನ್ನಳಿಬೇಕವ್ವ | ಶಂಕರನಮಗಳು ನೀನಾಗುವೇ ತಾಯಿ ||

ತಂದಿತ್ತು ತಾಯಿಲ್ಲನ್ನೊಂದು | ಬಂಧು ಬಳಗ ಮತ್ತಿಪ್ಪತ್ತೊಂದು | ಸಂದೇಹವಿಲ್ಲದೆ ಕೊಡಲಿಕೆ ಬಂದ | ಕಂದುಗೊರಳಿನ ಕರುಣದಿ ತಾಯಿ |


ನೂರೊಂದು ಸ್ಟಲದವ ಬಂದಿನಿ ಮಗಳೇ ಮೂರು ಲಿಂಗದ ನೆಲೆಯನು ಬಲೆ | ಮೀರಿದ ಉನ್ಮನಿ ಯೇರಬೇಕವ್ವ | ಸೂರ್ಯ ಚಂದ್ರರಾ ದಾರಿಯ ಹಿಡಿದು |

ಸಾದರ ಸಂಗವ ಮಾಡಬೇಕು ಮಗಳೇ | ವೇದ ಮೂರ್ತಿಯ ತಿಳಿಬೇಕು ತಂಗಿ | ನಾದ ಬ್ರಹ್ಮ ವ ಕೂಡಬೇಕವ್ವ | ಸಾಧಿಸಿಕೋಬೇಕು ಸಾಂಬನ ತಾಯಿ |

ಜೀವ ಪ್ರಪಂಚವ ಬಿಡಬೇಕು ಮಗಳೇ | ದೇವ ಪ್ರಪಂಚವ ಹಿಡಿಬೇಕು ತಂಗಿ | ಸಾವು ಪ್ರಪಂಚವ ಸಡಲಿಸಮ್ಮ | ಭಾವ ಪ್ರಪಂಚವ ಧೃಡ ವಿರಲಮ್ಮ |

ಸಿದ್ಧಾರೂಢನ ಮಗ ನಾನವ್ವ |ನಿದ್ರಿಗೆ ಸಾಕ್ಷಾಗಿರುವನು ತಂಗಿ | ಚಿದ್ರೂಪ ಸಂದಾನ ಹೇಳಲಿಕೆ ಬಂದೆ | ಸದೂಪ ನೀನಾಗಿರಬೇಕಮ್ಮಾ |

ವಿರಾಟ ಸ್ವರಾಟ ವಿರಾಟವು ಕೂಡಿ | ಬಹಳೋರಾಟಿಯಿಂದ ನಾ ಬಂದೀನಿ ಮಗಳೇ | ಈ ನರಾಟವೆಲ್ಲಾ ಮುರಿಲಿಕೆ ತಂಗೀ | ನಿನ್ನ ಮುರಾಟಿಕೆಯಲ್ಲಿ ಮುರಿಬೇಕಮ್ಮ |

ಸಹಸ್ರದಳ ಕಮಲದಲ್ಲಿ ಶಿವನು | ಆರೈಸಿರುವನು ನೋಡವ್ವ ತಂಗೀ | ಕಾಶೀ ರಾಮೇಶ್ವರನಲ್ಲಿರುವನು ಮಗಳೇ || ಮೀಸಲು ಅಡಿಗೆ ಉಣಬೇಕಮ್ಮಾ |

ಷಣ್ಮುಖ ಉಪಾಸನೆ ಮಾಡಬೇಕು ಮಗಳೇ | ಷಣ್ಮುದ್ರಿಗಳ ನೋಡಬೇಕವ್ವ | ಕಣ್ಣು , ಮೂಗು , ಕಿವಿ , ಮುಚ್ಚಿಡಬೇಕು ತಂಗೀ | ಷಣ್ಮತ ಆಚರಿಸಿ ನಡಿಬೇಕಮ್ಮ

ಪಂಚಯೋಗವ ಮಾಡಬೇಕು ಮಗಳೇ | ಪಂಚಲಕ್ಷಣವನರಿಬೇಕು ತಂಗೀ | ಪಂಚ ಮುದ್ರಿಯ ಬಲಿಬೇಕಮ್ಮ ಪಂಚಾಕ್ಷರಿಯುನು ನುಡಿಬೇಕು ತಾಯೀ |

ಅಷ್ಟಾಂಗ ಯೋಗವ ಮಾಡಬೇಕು ಮಗಳೇ ಅಷ್ಟಸಿದ್ದಿಯನು ಪಡಿಬೇಕು ತಂಗೀ || ಅಷ್ಟ ಮೂರ್ತಿಯಾಗಿರಬೇಕಮ್ಮ | ಅಷ್ಟೆಶ್ವರ್ಯದೊಳು ಕೂಡಬೇಕು ತಾಯಿ |

ತಾರಕ ಮಂತ್ರವ ಹೇಳಿದೆ ಮಗಳೇ | ನಾಡಿಗೆ ಸರಾತ್ಮಕನನು ತಾಯಿ | ಬ್ಯಾರಿಲ್ಲವ್ಯಾ ಪರಮಾನ ಪದವು || ನೂರಾನಂದಕೆ ಮೀರಿದೆ ಮಗಳೆ |

ದರ್ಪಣ ಮುಖ ಸ್ವರೂಪವು ನೋಡೆ | ಕಪ್ಪು ಗೊರಳಿನಲ್ಲಿರುವನು ತಂಗಿ | ಸರ್ಪ ಭೂಷಣನ ಕೂಡಬೇಕವ್ವ | ಕರ್ಪೂರ ದಾರತಿ ಬೆಳಗಬೇಕು ಮಗಳ |

ಸ್ವರ್ಗದ ಹಾದಿ ಬಿಡಬೇಕು ತಾಯಿ | ಭರ್ಗು ದೇವನ ನೆನಿಬೇಕು ತಂಗಿ ! ನಿರ್ಗುಣ ಸಮಾಧಿ ಮಾಡಬೇಕವ್ವ | ದುರುಗವ್ವನ ಗುಡಿಗೊಗಬೇಕು ಮಗಳ |

ತಿರುಗುತ ಐವತ್ತೆರಡಕ್ಷರ ತಾಯಿ | ಬರದರು ಬ್ರಹ್ಮಾಂಡದ ಜನರವ್ವ | ಕರಿವರು ನಾಮ ರೂಪ , ಕ್ರಿಯೆಯನು || ಪರಿಪರಿ ಷಟ್ ಕರ್ಮದ ಮತದವರು |

ಸತ್ತು ಎಂಬುದು ಇರುವುದು ಮಗಳೇ | ಚಿತ್ತು ಎಂಬುದೇ ಅರಿವುದು ತಂಗೀ । ಮತ್ತಾನಂದವೇ ಬಹು ಸುಖವವ್ವ | ನಿತ್ಯ ಪೂರ್ಣ ಭೂತಯ್ಯನ ಮಗಳೇ |

show more

Share/Embed