Part-2 | ಪವರ್ ಫುಲ್ ದೇವಿ | ಶ್ರೀ ಕಾಳಿಕಾದೇವಿ ದೇವಸ್ಥಾನದ ವಿಶೇಷ ಮಾಹಿತಿ | ವಿಶೇಷ ಹರಕೆ ತಿರಿಸೋ ಸಂಪ್ರದಾಯ |
Arun C Badiger Arun C Badiger
6.96K subscribers
29,121 views
0

 Published On Aug 24, 2023

ನಮ್ಮ ದೇಶದಲ್ಲಿರೋ ಅನೇಕ ದೇವಸ್ಥಾನಗಳು ತುಂಬ ಶಕ್ತಿಯುತವಾಗಿವೆ.. ಅದರಲ್ಲಿ ಶ್ರೀ ಕಾಳಿಕಾದೇವಿಯ ದೇವಸ್ಥಾನವೂ ಒಂದು.. ಆದ್ರೆ ಕೆಲವು ದೇವಸ್ಥಾನಗಳಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿಲ್ಲ. ಅದರ ಅಭಿವೃದ್ಧಿ ಕಡೆಗೂ ಗಮನ ಹರಿಸಿಲ್ಲ. ಈ ದೇವಸ್ಥಾನಗಳಿಗೆ ಅದರದೆ ಆದ ಕೆಲವೊಂದು ಪೌರಾಣಿಕ ಕಥೆಗಳನ್ನ ಹೊಂದಿವೆ‌. ಐತಿಹಾಸಕ ಶಿಲಾಶಾಸನಗಳಿವೆ. ಆದರು ಇವುಗಳ ಬಗ್ಗೆ ಸರ್ಕಾರ ಗಮನಹರಿಸದೇ ಇರೋದು ದರಂತ.

ಬೆಳಗಾವಿ ಜಿಲ್ಲೆಯ ಶಿರಸಂಗಿಯ ಕಾಳಿಕಾ ದೇವಿಯ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿ ಕ್ಷೇತ್ರಗಳಲ್ಲಿ ಒಂದು. ಶಿರಸಂಗಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.

ರಾಮಾಯಣ ಕಾಲದಲ್ಲಿ ದಶರಥ ಮಹಾರಾಜ ಪುತ್ರಕಾಮೇಷ್ಠಿ ಯಾಗ ಮಾಡಲು ನಿಶ್ಚಯಿಸಿದಾಗ ಮುಖ್ಯ ಅಗ್ನಿಹೋತ್ರಿಯಾಗಿ ಶಿರಸಂಗಿಯಲ್ಲಿ ತಪಸ್ಸು ಮಾಡುತ್ತಿದ್ದ ವಿಶ್ವಕರ್ಮ ವಂಶಸ್ಥನಾದ ಕಾಶ್ಯಪ ಗೋತ್ರದ ವಿಭಾಂಡಕ ಮುನಿಯ ಮಗನಾದ ಶೃಂಗ ಋಷಿಯನ್ನು ಆಹ್ವಾನಿಸಿದನೆಂಬ ಐತಿಹ್ಯವಿದೆ.

ರಾಮ, ಲಕ್ಷ್ಮಣರು ಇಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ಮಾಹಿತಿ ಕ್ರಿ.ಶ 1148ರಲ್ಲಿ ಕಲ್ಯಾಣ ಚಾಲುಕ್ಯ ಅರಸು ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕಾಳಿಕಾ ದೇವಸ್ಥಾನದ ಬಳಿ ನೆಟ್ಟ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ.

ಪುರಾಣ ಕಾಲದಲ್ಲಿ ಶಿರಸಂಗಿಯಲ್ಲಿ ಋಷಿಗಳು ಮಾಡುತ್ತಿದ್ದ ಯಜ್ಞ ಯಾಗಗಳಿಗೆ ರಾಕ್ಷಸರಿಂದ ಆಗಾಗ ಭಂಗ ಉಂಟಾಗುತ್ತಿತ್ತು. ಅದನ್ನು ತಪ್ಪಿಸಲು ಕಾಳಿಕಾ ದೇವಿ ಇಲ್ಲಿ ನೆಲೆಸಿ ರಾಕ್ಷಸರನ್ನು ಸಂಹರಿಸಿದಳು ಎಂಬ ಐತಿಹ್ಯವಿದೆ. ಕಾಳಿಕಾ ದೇವಿ ವಿಶ್ವಕರ್ಮ ಸಮಾಜದವರ ಕುಲದೇವತೆ. ದೇವಿಯ ದರ್ಶನಕ್ಕೆ ಎಲ್ಲಾ ಸಮಾಜದ ಜನರೂ ಬರುತ್ತಾರೆ.

#india #ಧರ್ಮ #ಹಿಂದೂ #hindu #temple #indiantemples #travel #shirasangi #sirasangi #belgaum #belgavi #savadatti #ದೇವರು #ಕಾಳಿಕಾದೇವಿ #kalika #kalikadevi #status #vishwakarma #shiva #parvati #ram #purana #video #youtube #arunbadiger #vlog


Part - 1
👇👇👇👇👇👇
   • Part-1 | ಶಕ್ತಿ ದೇವತೆ‌ | ಶ್ರೀ ರಾಮ ಪೂಜಿ...  

show more

Share/Embed