ಕೋಳಿ ಮೊಟ್ಟೆ ಮತ್ತು ಆಹಾರದ ಹಕ್ಕು
MBV Karnataka MBV Karnataka
5.58K subscribers
106 views
6

 Published On Feb 9, 2022

ಬೆಂಗಳೂರು: ಆಹಾರದ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟಿದೆ. ವ್ಯಕ್ತಿಯ ಒತ್ತಡದ ಆಧಾರದಲ್ಲಿ ಆಹಾರ ನಿರ್ಧಾರವಾಗಬೇಕಿಲ್ಲ. ಆಹಾರದ ಹಕ್ಕು ವ್ಯಕ್ತಿಯ ವೈಯಕ್ತಿಕ ನಿರ್ಧಾರ. ತಿನ್ನುವ ಆಹಾರವನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮ್ ಹೇಳಿದರು.

ದಿನಾಂಕ 18/12/2021ರಂದು ಶನಿವಾರ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆದ 36ನೇ ವೆಬಿನಾರ್ ಸರಣಿಯಲ್ಲಿ “ಕೋಳಿ ಮೊಟ್ಟೆ ಮತ್ತು ಆಹಾರದ ಹಕ್ಕು” ವಿಷಯದ ಕುರಿತು ಮಾತಾಡಿದ ಅವರು, ಮಧ್ಯಾಹ್ನ ಬಿಸಿಯೂಟದೊಂದಿಗೆ ಮೊಟ್ಟೆ ಕೊಡಲು ಸರ್ಕಾರ ನಿರ್ಧರಿಸಿದೆ. ಪೌಷ್ಠಿಕಾಂಶ ಕೊರತೆ ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸುಮಾರು 42% ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ನೀತಿ ಆಯೋಗ ವರದಿಯ ಪ್ರಕಾರ ಪೌಷ್ಠಿಕಾಂಶದ ಕೊರತೆ ಇದೆ. ತಜ್ಞರು, ಅಧಿಕಾರಿಗಳು, ವೈದ್ಯರ ಸಲಹೆಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ವಿವಾದದ ಸ್ವರೂಪ ಕೊಟ್ಟವರು ಕೆಲವು ಮಠಾಧೀಶರು. ಮೊಟ್ಟೆ ಕೊಡುವುದರ ವಿರುದ್ಧ ಹೋರಾಟವನ್ನು ಮಠಾಧೀಶರು ಮಾಡಿದರು. ಮೊಟ್ಟೆ ಬೇಡ ಎಂದವರಿಗೆ ಬಾಳೆಹಣ್ಣು ಕೊಡುವ ಅವಕಾಶ ಇದೆ. ಮಠಾಧಿಪತಿಗಳು ಮೊಟ್ಟೆ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರು.

#Egg #Veg #KSShivaram #foodstyle

show more

Share/Embed